![]() |
ಒಮ್ಮೆ ನೀ ಬರಬಾರದೇ
.................................................
ಕಳೆಯಬೇಕು ಎಂದುಕೊಳ್ಳುತ್ತೇನೆ
ನಿನ್ನ ಜೊತೆ ಕಳೆದ-
ಕಳೆದುಹೋದ;
ಆ ಸಂಜೆಯಂತಹ
ಇನ್ನೊಂದು ಸಂಜೆ....
ಒಮ್ಮೆ ನೀ ಬರಬಾರದೇ ....
ಕತ್ತಲಾಗುವಾಗಲೆಲ್ಲ
ಮೆಲ್ಲ ಪಿಸುಗುಡುತ್ತದೆ
ನನ್ನೀ ಮನ-ಒಳಗೆಲ್ಲೋ ಸಂದಿಯಲಿ;
ಅವಳಿಲ್ಲವೆ ಎಂದು ?
ಆಗೆಲ್ಲ...
ಕತ್ತು ನೋಡುತ್ತದೆ
ನೀ ಇಣುಕಿರುವ
ಅದೇ ಕಿಟಕಿಯಲಿ
ಒಮ್ಮೆ ಬರಬಾರದೇ
ನನ್ನ ರಾದೆ
ಎಂದು ಕಂಬನಿಗರೆಯಲು
ಹಾತೊರೆಯುತ್ತದೆ
ನೀ ಮುತ್ತನಿಕ್ಕಿದ
ಈ ಕಂಗಳು;
ಒಮ್ಮೆ ನೀ ಬರಬಾರದೇ ......
