ಆಸೆಯದೊಂದು ಚಲನೆ
ದಿಕ್ಕುಗಳು ಗೊತ್ತಿಲ್ಲ
ನನ್ನಾಸೆಗಳಿಗೆ...
ದಿಕ್ಸೂಚಿಯ ಅವಶ್ಯಕತೆಯೂ ಬೇಕಿಲ್ಲ;
ಚಲಿಸುವವು
ಅತ್ತಿಂದಿತ್ತ - ಇತ್ತಿಂದತ್ತ
ಒಮ್ಮೆ ಬುದ್ದಿಗೆ ಗುದ್ದಿ
ಇನ್ನೊಮ್ಮೆ ಮನಸ್ಸಿಗೆ ನುಗ್ಗಿ
ಕೆಲವೊಮ್ಮೆ ಭಾವಗಳೊಂದಿಗೆ ಸಂದಿಸಿ
ಇತರರೊಡನೆ ಸ್ಪರ್ಧಿಸಿ
ಎದ್ದು ನಿಲ್ಲುತ್ತವೆ...
ಅಮಾವಾಸ್ಯೆಯ ಕತ್ತಲಲಿ
ಕೊಳ್ಳಿ ದೆವ್ವವೆದ್ದಂತೆ
ಮತ್ತೊಮ್ಮೆ ಚಂದ್ರೋದಯದಿ
ಹೆಚ್ಚುವ ಅಬ್ಧಿಯಂತೆ
ನನ್ನ ಕಾಯ ನನ್ನಲೇ ಬಿಟ್ಟು
ಹೊರಟು ನಿಲ್ಲುತ್ತವೆ
ರಾಜ ರಸ್ತೆಯಲಿ ಮೆರವಣಿಗೆ
ನಾನೂ ಸುಮನಿರುತ್ತೇನೆ
ಇಲ್ಲವೆಂದು (ದೂ) ಬೆಳವಣಿಗೆ
ಆಸೆ ಇಲ್ಲದಿದ್ದೊಡೆ
.............................. .......
ಚಾಲಕ ಶಕ್ತಿ : ರಮೇಶ್ ಕೊಣಾಜೆ
